ತವಕ್ಷೀರ   -
 	ಮರಾಂಟೇಸೀ ಕುಟುಂಬಕ್ಕೆ ಸೇರಿದ ಒಂದು ಆಹಾರ ಸಸ್ಯ, ಮಾರಾಂಟ ಅರುಂಡಿನೇಸಿಯ ಎಂಬುದು ಇದರ ಶಾಸ್ತ್ರೀಯನಾಮ.  ಅರಾರೂಟ್ ಎಂಬುದು ಇದರ ಸಾಮಾನ್ಯ ಇಂಗ್ಲಿಷ್ ಹೆಸರು.  ಆರೋರೂಟ್ ಎಂಬುದು ರೆಡ್ ಇಂಡಿಯನ್ ಪದ ಅರಾ-ರುಟ (ಎಂದರೆ ಹಿಟ್ಟುಳ್ಳ ಬೇರು) ಎಂಬುದುರಿಂದ ನಿಷ್ಪತ್ತಿಯಾಗಿದೆ.  ಅಲ್ಲದೆ ಜಿóಂಜಿಬರೇಸೀ ಕುಟುಂಬಕ್ಕೆ ಸೇರಿದ ಕಕ್ರ್ಯುಮ ಆಂಗುಸ್ಟಿಫೋಲಿಯ.  ಹಿಚೀನಿಯ ಕಾಲೈನ್ ಎಂಬ ಪ್ರಭೇದಗಳಿಗೂ ಇದೇ ಹೆಸರು ಅನ್ವಯವಾಗುತ್ತದಾದರೂ ಇವು ವiರಾಂಟಕ್ಕಿಂತ ಭಿನ್ನವಾಗಿವೆ.  ವiರಾಂಟ ಜಾತಿ ತುಂಬ ಸುಂದರವಾದ ಎಲೆಗಳನ್ನು ಪಡೆದಿರುವುದರಿಂದ ಅಲಂಕಾರಕ್ಕಾಗಿ ಬೆಳೆಸುವುದೂ ಉಂಟು.  ಇದರ ಹಳದಿಮಿಶ್ರಿತ ಬಿಳಿಯ ಬಣ್ಣದ ಬೇರುಗಳನ್ನು ಕತ್ತರಿಸಿ, ನೀರಿನಲ್ಲಿ ನೆನೆಸಿ, ಮೇಲಿನ ನಾರು ಹೊದಿಕೆಯನ್ನು ತೆಗೆದುಹದÀಗೊಳಿಸುತ್ತಾರೆ. ಅನಂತರ ಪಿಷ್ಟಯುಕ್ತ ತಿರುಳನ್ನು ಮೆತ್ತಗಾಗುವಂತೆ ಬಡಿದು ನೀರಿನಿಂದ ತೊಳೆದು, ಶೋಧಿಸಿ, ನಾರಿನ ಅಂಶವನ್ನೂ ಕಚ್ಚಾಷಿಷ್ಟವನ್ನೂ ಬೇರ್ಪಡಿಸುತ್ತಾರೆ.  ತರುವಾಯ ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಲಾಗುತ್ತದೆ. ಅರಾರೂಟ್ ಪಿಷ್ಟ ಹಗುರವಾದ, ಬಣ್ಣವಿಲ್ಲದ, ರುಚಿಯಿಲ್ಲದ ಬಿಳಿಯ ಪುಡಿ, ಇದನ್ನು ಬಿಸಿನೀರಿನಲ್ಲಿ ಬೆರೆಸಿದಾಗ, ಪಾರದರ್ಶಕ, ವಾಸನಾರಹಿತ, ರುಚಿಕರ ಗಂಜಿ ದೊರೆಯುತ್ತದೆ.  ಇದು ಸುಲಭವಾಗಿ ಜೀರ್ಣವಾಗುವ ಕಾರಣದಿಂದ ರೋಗಿಗಳಿಗೂ ಮಕ್ಕಳಿಗೂ ಕೊಡುವುದುಂಟು.  ಆದರೆ ಗಮನಾರ್ಹ ಪ್ರಮಾಣದಲ್ಲಿ ಪ್ರೋಟೀನುಗಳೂ ಲವಣಾಂಶಗಳೂ ಇಲ್ಲದಿರುವುದರಿಂದ ತವಕ್ಷೀರವನ್ನು ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿಲ್ಲ. 								(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ